Tuesday 9 June 2015

ಸಮಾಧಾನ

ಅಪರೂಪಕ್ಕೆ ಹುಟ್ಟಿಕೊಂಡ ಕವನ..ಬಹಳ ದಿನಗಳ ನಂತರ ಬ್ಲಾಗ್ ಲೋಕಕ್ಕೆಳೆತಂತು... 


ಸಮಾಧಾನ 



ಬತ್ತಿ ಹೋಗಿದೆಯೇಕಣ್ಣೀರು?
ಬಾ ನನ್ನ ಬಳಿಗೆ, ಕೊಡುವೆ ಒಂದಿಷ್ಟು ಕಡ
ಉದುರಿಸಿ ಬಿಡು ಒಮ್ಮೆಆನಂದದಿಂದ!

ಜಗದಚಿಂತೆ ಬಿಡು, ವ್ಯಂಗ್ಯವೇಅದರ ಬಗೆ
ಇರದಿದ್ದರೆ ಹೇಗೆ ಒಬ್ಬನಾದರೂ ಹಗೆ?
ನಿನ್ನ ನೀನರಿಯುವ ಬಗೆ ಎಂತು ಮತ್ತೆ?

ಸಂಭ್ರಮಕೆ ಮುಖ ತೂರುವ ಮಂದಿ ನೂರೆಂಟು
ಸಂಗ್ರಾಮಕೆ ಹಾತೊರೆಯುವ ಜಗಳಗಂಟರೇ ಎಲ್ಲ
ಆದರೂ ಹರಿಸಿ ಬಿಡು..ಆನಂದ ಬಾಷ್ಪ|

ಎಂದಾದರೊಂದು ದಿನ ಏಕಾಂಗಿ ಅನಿಸಿದರೆ
ನೋಡಿ ಬಿಡು ಕಡಲಲೆಯ ಶ್ರೀಮಂತಿಕೆಯ
ಅದು ನಿನ್ನ ಹಾಗೆಯೇ ಏಕಾಂಗಿ ತಾನೇ!!!

ಬಯಸಿದ್ದೆಲ್ಲಾ ಬರದ ಈ ಬದುಕ ಬಗೆಗೇಕೆ
ತಾತ್ಸಾರ ನಿನ್ನ ಮನದೊಳಗೆ ಗೆಳತೀ
ಅತ್ತು ಹಗುರಾಗಿ ಬಿಡು ನೀನೇ ನಿನ್ನೊಡತಿ!!










2 comments:

  1. ಜೀವನ ಮೌಲ್ಯದ ಪಾಠದಂತಿದೆ ಸೊಗಸಾಗಿದೆ.

    ReplyDelete
  2. ಕವನ ತುಂಬಾ ಚೆನ್ನಾಗಿದೆ. ಅದಕ್ಕೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕೆನ್ನುವುದು. ಆಕಾಶ ಕುಸಿದರೂ ಬದುಕಬಹುದು.. ಆತ್ಮವಿಶ್ವಾಸ ವಿಲ್ಲದಿದ್ದಾರೆ...ಬದುಕು ಅಸಾಧ್ಯ.

    ReplyDelete