Tuesday, 4 December 2012

ಬ್ಲಾಗಿನ ಬಾಗಿಲಲಿ ......

ಸ್ನೇಹಿತರೆ
ಮೊದಲು ನನ್ನದೊಂದು ಥ್ಯಾಂಕ್ಸ್ ಸಲ್ಲಬೇಕಾದ್ದು, ಸ್ನೇಹಿತ ದಿನಕರ ಮೊಗೇರರಿಗೆ. ಯಾವ ಜನ್ಮದ ಮೈತ್ರಿಯೋ ಎನ್ನುತ್ತಾರಲ್ಲ ಹಾಗೆ, ಈ  ಸಾಹಿತ್ಯಾಸಕ್ತಿ ನನ್ನನ್ನು ಮತ್ತು ಭಟ್ಕಳದ ಈ  ಸ್ನೇಹಿತನನ್ನು ಹತ್ತಿರ ತಂದಿದ್ದು, ಮತ್ತು ಆ ಹತ್ತಿರಕ್ಕೆ ೩ಕೆ ಕಾರಣವಾದದ್ದು, ಮನಸ್ಸಿಗೆ ಮುದ ನೀಡುವ ವಿಚಾರ. ಈ  ದಿನಕರ ಇಂದು ಮಧ್ಯಾಹ್ನ ಫೋನಾಯಿಸಿ, ದುಬೈ ನಿಂದ ಅಜಾದ್ ಸರ್ ಬಂದಿದ್ದಾರೆ ರಾತ್ರಿ ಅವರೊಟ್ಟಿಗೆ ಕುಳಿತು ಒಂದು ಊಟ ಮಾಡಿದರೆ ಹೇಗೆ ಅಂದಾಗ, ಮನಸ್ಸು ಒಪ್ಪದಿರಲು ಯಾವ ಕಾರಣವೂ ಇರಲಿಲ್ಲ. ಸರಿ, ಇಂದು ರಾತ್ರಿಯ ಊಟ, ಮಂಗಳೂರಿನ ಎಂ ಜಿ ರಸ್ತೆಯ ದೀಪಾ ಕಂಫರ್ಟ್ಸ್ ನಲ್ಲಿ ಎಂದು ಬರೆದಿರುವಾಗ ನಾನಾದರೂ ಏನು ಮಾಡಲಿಕ್ಕಿದೆ ಎಂದು ಕೊಂಡೆ .
ಸರಿಯಾಗಿ ೭.೩೦ಕ್ಕೆ ಸಿಗುವುದು ಎಂದೇನೋ ಎಸ್ ಎಂ ಎಸ್ಸಿಸಿ ಕೊಂಡಿದ್ದರೂ, ಅಲ್ಲಿ ಸೇರಿದ್ದು  ಘಂಟೆ ಎಂಟಕ್ಕೆ. ನಾನು, ದಿನಕರ ಅಲ್ಲದೆ   ಅಲ್ಲಿದ್ದುದು ಹೊಸ ಮುಖಗಳೇ. ಅಜಾದ್ ರನ್ನು ಕಂಡಾಗ ಹಿರಿಯಣ್ಣನನ್ನು ಕಂಡ  ಭಾವನೆ ಮೂಡಿದ್ದು, ಅವರೊಂದಿಗೆ ಮಾತಾಡುತ್ತಿದ್ದ ಶೀಲಾ ರನ್ನು ಕಂಡಾಗ ತಂಗಿಯಂತೆ ಕಂಡುದು, ತುಸು ಹೊತ್ತಿನಲ್ಲಿ ಸೇರಿಕೊಂಡ ಆಶಾ ದಂಪತಿಗಳ ನಡುವೆ ಈ ಟಿವಿ ಯಾ ನ್ರತ್ಯ ವಿಶಾರದೆ ಪೂರ್ವಿ......ಅಲ್ಲಿ ಏರ್ಪಟ್ಟುದು  ಮಾತ್ರ ಎಷ್ಟೋ ವರ್ಷಗಳ ಬಂಧುಗಳು ನಾವು ಎಂಬ  ಭಾವ. ಇದರ ಬಗ್ಗೆ ಮುಂದೆ ಬರೆದೇನು.
ಇಲ್ಲಿ ಹೇಳಲೇ ಬೇಕಾದ ವಿಚಾರವೆಂದರೆ, ಬ್ಲಾಗ್ ಬಗ್ಗೆ ಅಷ್ಟೇನೂ ತಿಳುವಳಿಕೆ ಇರದಿದ್ದ ನಾನು, ಈ  ಎಲ್ಲಾ ಬ್ಲಾಗಿಗರ ನಡುವೆ ಕುಳಿತು ಮಾತಾಡುತ್ತಿದ್ದರೆ, ಅದೇನನ್ನೋ ಕಳೆದುಕೊಂಡಂತೆ ಅನುಭವವಾಯಿತು. ನನ್ನದೂ ಒಂದು ಬ್ಲಾಗ್ ಇರಬೇಕೆಂಬ ಬಯಕೆ ನನ್ನೊಳಗೆ ಪ್ರವಾಹೋಪಾದಿಯಲ್ಲಿ ಹುಟ್ಟಿಕೊಂಡಿದ್ದು ನಿಜ. ಅದಕ್ಕೆಂದೇ ಮನೆಗೆ ಬಂದವನು ಮೊದಲು ಮಾಡಿದ ಕೆಲಸ, ನನ್ನದೊಂದು ಬ್ಲಾಗ್ ಸ್ರಷ್ಟಿ. ಇದಕ್ಕೆ ನಾನು ಆಯ್ದು ಕೊಂಡ  ಶೀರ್ಷಿಕೆ ನಿಮಗೆ ರಗಳೆಯಾದರೆ, ನಾನೇನು ಮಾಡುವ ಹಾಗಿಲ್ಲ. ಈ  ಬ್ಲಾಗ್ ನ ಹುಚ್ಚನ್ನು ನನ್ನೊಳಗೆ ತುಂಬಿಸಿದ ಆರೋಪಿಗಳು ಎಂದರೆ ದಿನಕರ್, ಅಜಾದ್ ಸರ್, ಸಹೋದರಿಯರಾದ ಆಶಾ ಹಾಗೂ ಶೀಲಾ ಅವರು.  ನೇ ಇರಲಿ. ನನ್ನದೇ ಒಂದು ಬ್ಲಾಗ್ ಸ್ರಷ್ಟಿ ಏನೋ ಆಗಿದೆ. ಇನ್ನು ಇದಕ್ಕೆ ಹೊಟ್ಟೆಗೆ ಹಾಕಿ, ಬೆಳೆಸಿ ಪೋಷಿಸುವ ಕೆಲಸವೂ ಆಗಲೇ ಬೇಕು.
ನನ್ನದು ಅಂತ ಒಂದು ಅಂತರಜಾಲ ಪತ್ರಿಕೆ ಸ್ರಷ್ಟಿಸಿ, ಕೆಲವು ಕಾರಣಗಳಿಂದ ಅದನ್ನು ಮುಂದುವರಿಸಲಾರದ ನನ್ನ ನೋವು ಶತ್ರುವಿಗೂ ಬೇಡ. ಆ ನೋವಿಗೆ ಈ  ಬ್ಲಾಗ್ ತುಸುವಾದರೂ ಸಮಾಧಾನ ತಂದರೆ ಅದುವೇ ನನಗೆ ನೆಮ್ಮದಿ . ಅಷ್ಟು ಮಾತ್ರ ಈ ಸಂದರ್ಭದಲ್ಲಿ ಹೇಳ ಬಲ್ಲೆ.
ಏನೇ ಇರಲಿ...ಇದು ಆರಂಭ...ನೋಡೋಣ ಮು೦ದುವರಿದೀತು ಈ  ಬ್ಲಾಗ್ ಪಯಣ...ಮತ್ತೆ ಸಿಗುತ್ತೇನೆ. ಮತ್ತೊಮ್ಮೆ ದಿನಕರನಿಗೆ ಧನ್ಯವಾದಗಳು. ಇದನ್ನು ಓದುತ್ತಿರುವ ನಿಮಗೆಲ್ಲರಿಗೂ......
ನಿಮ್ಮವನು
ವಶಿದಾಸ

3 comments:

  1. ವಶಿದಾಸನ ರಗಳೆಗಳು ಏನೇ ಇದ್ದರೂ ಸದಾ ಸಹ್ಯವೂ ಆನಂದಕರವೂ ಅಗಿರುತ್ತದೆ ಎಂಬ ನಂಬಿಕೆ ನನಗಿದೆ :)))) ಸದಾಶಿವ ರಾಯರೇ ಬೇಗ ಇದರ ಹೊಟ್ಟೆ ತುಂಬಿಸಿ :))

    ReplyDelete
  2. ನನ್ನ ಧನ್ಯವಾದ ದಿನಕರ ಅವರಿಗೆ ಸಲ್ಲಿಸಿ ಸದಾಶಿವ ಅಣ್ಣ! ನಾನೂ ನಿಮಗೆ ಹೇಳುವವಳಿದ್ದೆ...ಆದರೆ ಮೊದಲನೆಯ ಭೇಟಿ..ಹಾಗಾಗಿ ಹೇಳಲಾಗಲಿಲ್ಲ. ಒಟ್ಟಾರೆ ನಿಮ್ಮ ಬರವಣಿಗೆ ಓದುವ ಉತ್ಸಾಹವಿದೆ. ಹಾಗಾಗಿ ವಶಿದಾಸನ ಬರಹಗಳಿಗಾಗಿ ಕಾಯುತ್ತಿರುತ್ತೇನೆ.
    ಶುಭವಾಗಲಿ!

    ReplyDelete
  3. ಪ್ರಥಮ ದಿನ ಶಾಲೆಗೆ ಹೋಗುವಾಗ ಮಗು ತಾನು ಎರಡು ಮೂರು ವರ್ಷ ಆಟ ಆಡಿದ ಮನೆಯನ್ನು ಕೆಲವು ಘಂಟೆಗಳು ತೊರೆಯಬೇಕು ಎನ್ನುವ ಭಾವ ಆ ಮಗುವಿಗಷ್ಟೇ ಗೊತ್ತು...ಆದರೆ ಮನೆಯಲ್ಲಿಯೇ ಮಗು ಇರಬಾರದು ಮಗುವಿನ ಒಳಜಗತ್ತು ಹೊರಜಗತ್ತಿಗೆ ಪರಿಚಯವಾಗಬೇಕಾದರೆ ಮಗು ಹೊರಗೆ ಬರಲೇಬೇಕಾಗುತ್ತದೆ. ಈ ಸುಮಧುರ ಭಾವ ನಿಮ್ಮ ಲೇಖನದಲ್ಲಿ ಕಂಡೆ ಸರ್..ಒಂದನ್ನು ಹಿಡಿಯಬೇಕಾದರೆ ಒಂದನ್ನು ಬಿಡಲೇಬೇಕು (ತಾತ್ಕಾಲಿಕವಾಗಿಯಾದರೂ) ಎನ್ನುವ ಸಿದ್ಧಾಂತ ನಿಮ್ಮ ಲೇಖನದಲ್ಲಿ ಮೊರೆಯುತ್ತದೆ..ನಿಮ್ಮ ಮುಂದಿನ ಹೆಜ್ಜೆಗೆ ಸ್ವಾಗತ ಮತ್ತು ನಮ್ಮ ಸದಾಶಯಗಳು ಜೊತೆಯಲ್ಲೇ ಇರುತ್ತವೆ...ಸುಂದರ ಮನಸ್ಸಿನ ಭಾವದ ಅನಾವರಣ...

    ReplyDelete