Thursday, 1 May 2014

ಪಾಠ...

ನಾನೇನೂ ಕವಿಯಲ್ಲ.... ಆ ಕ್ಷಣಕ್ಕೆ ಹೊಳೆದದ್ದನ್ನು ಗೀಚಿ ಬಿಡುವುದು ನನ್ನ ಅಭ್ಯಾಸ... ಅಂತಹ ಒಂದು ಕವನ ಇಂದು ಹುಟ್ಟಿ ಕೊಂಡಿತು.... ಸಂಗ್ರಹಕ್ಕೂ, ತಮ್ಮ ಗಮನಕ್ಕೂ ಇರಲಿ ಎಂದು ಈ ಬ್ಲಾಗ್  ನಲ್ಲಿ ಅಡಗಿಸಿ ಬಿಟ್ಟೆ.... ಪ್ರತಿಕ್ರಿಯೆಗೆ ಕಾಯುವುದು ಸಹಜ...ಬರೆಯುತ್ತೀರಾ????


                                                      ನಾನೂ ಸೋತಿದ್ದೇನೆ ಅನೇಕ ಬಾರಿ
                                                      ಅದಕೆ ಒಂದಲ್ಲ,  ಹತ್ತು ಹಲವು ದಾರಿ
ಪ್ರತಿಬಾರಿಯೂ ಅದರ ಪ್ರತಿಫಲನ ಒಂದೇ
ಸಾಗುತಿರು  ನೀ ಮತ್ತೆ ಮತ್ತೆ ಮುಂದೆ!!      


ಅಷ್ಟಕ್ಕೂ ಏನಿದೆ ಇಲ್ಲಿ ಬಿಟ್ಟರೆ ಮಣ್ಣು..?
ಎಂಬವರ ಮನಸೊಳಗೆ ತೆರೆಯದೇ ಕಣ್ಣು??
ಮಣ್ಣಲ್ಲವೇ ಹೊನ್ನ ಮೊಗೆದು ಕೊಡುವ ಜೀವ
ಸೇರುವುದು ಬಿಟ್ಟು ಎಲ್ಲರೊಳಗಣ ಭಾವ??

ಗೆದ್ದಿಲ್ಲವೆಂದಲ್ಲ,ಲೆಕ್ಕವಿಟ್ಟಿಲ್ಲ ಅಷ್ಟೇ!
ಅದು ನನ್ನ ಸಾಧನೆ, ಮತ್ತೆ ಅಷ್ಟಕ್ಕಷ್ಟೇ!!
ನನ್ನ ನೋವು ಮಾತ್ರ ಕಂಡವರ ಹಣೆಗೆ
ನಲಿವೆಲ್ಲಾ ನನ್ನದೇ, ಇದು ನನ್ನ ಬಗೆ!!

ನಿನ್ನ  ಗೆಲುವಿಗೆ ಎಲ್ಲರೂ  ವಾರೀಸುದಾರ
ಸೋಲಿಗೆ ನಿನ್ನ ಹಣೆಬರಹವೇ ಗುರಿಕಾರ
ಮರೆತು ಬಿಡು ಜಗ ಇರುವುದೇ ಹೀಗೆ
ನಡೆದು ಬಿಡು, ನಿನ್ನ ದಾರಿ ಇರುವುದೇ ಹಾಗೆ!!












1 comment: